Wednesday, 16 January 2013

ಸುಖ


ಹಣತೆಯ
ಕೈಯಲ್ಲಿ ಹಿಡಿದು
ಬೆಳಕನರಸುವಂತೆ
ಜೀವನದಲ್ಲಿ
ಸುಖ - ಸಂತೋಷಗಳ
ಹುಡುಕುವ
ಮೂರ್ಖತನವೇಕೆ!!!

ಕಣ್ಣ ಹೊಳಪು


ನಿನ್ನ ಕಣ್ಣಲೇನೋ ಹೊಳಪಿದೆ ಗೆಳತಿ
ಸೂಜಿಗಲ್ಲಿನಂತ ಸೆಳೆತವಿದೆ
ಎವೆಯಿಕ್ಕದೆ ದಿಟ್ಟಿಸುತ್ತಿರುವ ಅದರಲ್ಲಿ
ನನ್ನದೇ ಪ್ರತಿಬಿಂಬವಿದೆ!!!

Saturday, 5 January 2013

ಮನದಾಳದ ಮಾತು



ಮನದಾಳದ ಮಾತುಗಳನ್ನ
ಮನಸ್ಸಿನಲ್ಲೇ ಬಚ್ಚಿಟ್ಟುಕೊಂಡ ತಪ್ಪಿಗೆ...
ಇಂದು ಅವಳು ...
ಬೇರೊಬ್ಬನ ಹೆಂಡತಿ..
ಇವನಿಗೆ ನೆನಪುಗಳೇ.. ಸಂಗಾತಿ!!!

Wednesday, 2 January 2013

ಏಕೆ?


ಸಂಭ್ರಮಗಳ ಹೊನಲು ಹರಿಯಲು ಬೇಡವೆನ್ನಲೇಕೆ
ಕಷ್ಟಗಳ ಸರಮಾಲೆಯ ಕಂಡು ಹೆದರಿಕೆ ಏಕೆ
ಪ್ರೀತಿಯು ಜೊತೆಗಿರಲು ಮೌನವೇಕೆ

Tuesday, 1 January 2013

ಕಾಲನ ಓಟ


ಕಾಲನ ಓಟವ
ತಡೆಯುವರುಂಟೇ
ಸಂಭ್ರಮವು.. ಸೂತಕವು..
ಎಲ್ಲವೂ.. ನಂಟೇ..
ಗೆಜ್ಜೆಯ.. ಹೆಜ್ಜೆಗೆ..
ನಿಲ್ಲುವರು ಉಂಟೆ..
ಉಳಿದಿದ್ದೆಲ್ಲಾ..
ನೆನಪಿನ.. ಗಂಟೇ..