ಸ್ನೇಹಿತರೇ, ಮೊದಲಬಾರಿಗೆ ಗದ್ಯ/ಹಾಸ್ಯಲೇಖನ/ಪ್ರಸಂಗ
(ಏನು ಕರೆಯಬೇಕು ತಿಳಿಯುತ್ತಿಲ್ಲ) ಬರೆದಿದ್ದೇನೆ... ಓದಿ.. ಇಷ್ಟವಾದರೆ
(ಇಷ್ಟವಾಗದಿದ್ದರೂ).. ನಿಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ, ಸೂಚನೆಗಳನ್ನು ನೀಡಿ ಎಂಬ
ಪ್ರೀತಿಯ ಒತ್ತಾಯದೊಂದಿಗೆ ... ನಿಮ್ಮ ಮುಂದೆ...
------------------------------ ---------------------
ಜಾಗಿಂಗ್ ಪ್ರಸಂಗ
****************
ಇತ್ತೀಚೆಗೆ ನನ್ನ ಪರಿಚಯದವರನ್ನು ಭೇಟಿಯಾದಾಗ..ಉ/ಕು/ಸಾಂ.. ಮುಗಿದ ಮೇಲೆ.. ನನ್ನನ್ನು ಆಪಾದಮಸ್ತಕವಾಗಿ ಗಮನಿಸಿದ ಅವರು
------------------------------
ಜಾಗಿಂಗ್ ಪ್ರಸಂಗ
****************
ಇತ್ತೀಚೆಗೆ ನನ್ನ ಪರಿಚಯದವರನ್ನು ಭೇಟಿಯಾದಾಗ..ಉ/ಕು/ಸಾಂ.. ಮುಗಿದ ಮೇಲೆ.. ನನ್ನನ್ನು ಆಪಾದಮಸ್ತಕವಾಗಿ ಗಮನಿಸಿದ ಅವರು
`ಇದೇನಯ್ಯ...
ಹೆಂಡತಿಯ ಆರೈಕೆ ಜೋರಾಗಿ ನಡೆಯುತ್ತಿದೆ ಅನಿಸುತ್ತೆ.. ಒಂದೆರಡು ಸುತ್ತು
ದಪ್ಪಗಾಗಿದ್ಯಾ' ಅಂತ ರಾಗ ಎಳೆದಾಗ.. ಅವರ ಗುಂಡಗಿನ ಹೊಟ್ಟೆಕಡೆ ನೋಡಿ ನಾನು ನಕ್ಕೆ..
ಅದಕ್ಕವರು `ನೋಡಯ್ಯ.. ನಾವು ಹೇಗಿದ್ರೂ ನಡೆಯುತ್ತೆ.. ಆದರೆ ನೀನು ತೆರೆಮೇಲೆ
ಕಾಣಿಸಿಕೊಳ್ಳೋನು.. ಬಾಡಿ ಮೇಂಟೈನ್ ಮಾಡಬೇಕು' ಅಂದಾಗ, ಇತ್ತೀಚೆಗೆ ಶೂಟಿಂಗ್
ಕಡಿಮೆಯಾಗಿ, ಮನೆಯಲ್ಲಿ ತಿಂದುಂಡಿದ್ದರ ಪರಿಣಾಮ ಇದು ಅಂತ ಅವರಿಗೆ ಮನವರಿಕೆ
ಮಾಡಿಕೊಟ್ಟೆ... ಸರಿ.. ಸಣ್ಣಗಾಗೋದು ಹೇಗೆ ಎಂಬ ಬಗ್ಗೆ ಒಂದಿಷ್ಟು ಪುಕ್ಕಟೆ ಸಲಹೆ
ಕೊಟ್ರು.. ತಲೆ ಆಡಿಸಿ ಮನೆಗೆ ಬಂದು .. ನನ್ನ ಹೆಂಡತಿಯ ಮುಂದೆ ಯಥಾವತ್ ವರದಿ
ಒಪ್ಪಿಸಿದೆ ನೋಡಿ.. ಹಳೇ ರೆಕಾರ್ಡು ಆನ್ ಆಯ್ತು.... ` ನಾನು ಎಷ್ಟು ಬಡಕೊಂಡ್ರು
ನೀವೆಲ್ಲಿ ನನ್ನ ಮಾತು ಕೇಳ್ತೀರಿ... ಶಂಖದಿಂದ ಬಂದ್ರೆ ತೀರ್ಥ.. ಬೇರೆಯವರು
ಹೇಳಿದ್ರೇನೇ ನಿಮ್ಮ ತಲೆಗೆ ಅರ್ಥ ಆಗೋದು... ಅಮೀರ್ ಖಾನ್, ಶಾರುಖ್, ಶಿವರಾಜ್ ಕುಮಾರ್
ಎಲ್ಲಾ ನಿಮಗಿಂತ ದೊಡ್ಡೋರು, ಹ್ಯಾಗೆ ಬಾಡಿ ಮೆಂಟೈನ್ ಮಾಡಿದ್ದಾರೆ ನೋಡಿ... ' ಹೀಗೆ
ಆಲಾಪ ಮುಂದುವರೆದೇ ಇತ್ತು.. ಅಲ್ಲಾ ನಾನು ಅಮೀರ್, ಶಿವರಾಜ್ ಕುಮಾರ್ ಅವರಿಗೆಲ್ಲಾ
ಹೋಲಿಕೆ ಮಾಡಿಕೊಂಡ್ರೆ.. ನವಿಲು ನೋಡಿ.. ಕೆಂಭೂತ ಪುಕ್ಕ ತೆರೆದುಕೊಂಡ ಹಾಗೆ ಆಗುತ್ತೆ
ಅಂತ ಇವಳ್ಗೆಲ್ಲಿ ಅರ್ಥ ಆಗಬೇಕು... ಸರಿ ನಾನು ಜಾಗಿಂಗ್ ಗೆ ಹೋಗ್ತೀನಿ ಅಂತ ಥೇಟ್
ರಾಜಕಾರಣಿಗಳ ಸ್ಟೈಲ್ ಲ್ಲಿ ಆಶ್ವಾಸನೆ ಕೊಟ್ಟೆ.. ` ಈ ಸಲ ನೀವು ಜಾಗಿಂಗ್ ಗೆ ಹೊಗ್ದೆ
ಇದ್ರೆ.. ವಾರ್ಡೋಬ್ ನಲ್ಲಿ ನೀವು ಆಗಲ್ಲ ಅಂತ ಇಟ್ಟಿರೋ ಪ್ಯಾಂಟ್ ಗಳನ್ನೆಲ್ಲಾ ..
ಪಾತ್ರೆ ಮಾರೋನ್ಗೋ.. ಇಲ್ಲಾ ಅಂದ್ರೆ ಎದುರು ಮನೆ ವಾಚ್ ಮೆನ್ಗೋ.. ಕೊಟ್ಬೀತೀನಿ' ಅನ್ನೋ
ಬ್ರಹ್ಮಾಸ್ತ್ರ ಪ್ರಯೋಗ ಮಾಡೇ ಬಿಟ್ಲು... ದುಬಾರಿ ಪ್ಯಾಂಟ್ ಗಳೆಲ್ಲಾ ಮೇಲೇರದೆ
ಇತ್ತೀಚೆಗೆ ಮುಷ್ಕರ ಹೂಡಿದ್ದರಿಂದ ವಾರ್ಡೋಬ್ ಸೇರಿದ್ವು.. ಒಂದಲ್ಲಾ ಒಂದಿನ ಮತ್ತೆ
ನಾನು ಸಣ್ಣಗೆ ಆಗೇ ಆಗ್ತೀನಿ ಅನ್ನೋ ಭರವಸೆಲಿ ಅವನ್ನೆಲ್ಲಾ ಹಾಗೇ ಇಟ್ಟಿದ್ದೆ.. ಈಗ
ಪಾತ್ರಮಾಡೋನ ಪ್ಯಾಂಟ್ಗಳೆಲ್ಲಾ ಪಾತ್ರೆ ಮಾರೋನ ಕೈಗೆ ಹೋಗೋ ಭಯ ಕಾಡೋಕೆ ಶುರುವಾಗಿ..
ಜಾಗಿಂಗ್ ಹೋಗೋದು ಅಂತ ತೀರ್ಮಾನ ಮಾಡೇ ಬಿಟ್ಟೆ.. `ಸರಿ ಮಾರಾಯ್ತಿ.. ನಾಳೆ ಭಾನುವಾರ
ರಜಾದಿನ.. ಸೋಮವಾರದಿಂದ ನಾನು ಜಾಗಿಂಗ್ ಹೋಗ್ತೀನಿ' ಅಂದೆ.. `ಭಾನುವಾರ ರಜಾದಿನ
ಮಾಡಿದ್ದು ಬ್ರಿಟೀಷ್ನೋರು.. ನಮಗೆಲ್ಲಾ ಭಾನುವಾರವೇ... ವಾರದ ಆರಂಭ..ರವಿವಾರವೇ ಶುಭ'
ಅಂತೆಲ್ಲಾ ಭಾಷಣ ಶುರುಮಾಡಿ ಬಿಟ್ಲು.. ನನಗೆ ತಪ್ಪಿಸಿಕೊಳ್ಳೋಕೆ ಇನ್ನು ಯಾವ ಚಾನ್ಸು
ಉಳಿಲಿಲ್ಲ... ಒಪ್ಪಿಕೊಂಡು.. ಈ ಮುಂಚೆಯೇ ಇದೇ ಪ್ರಯತ್ನದಲ್ಲಿ ಖರೀದಿಸಿದ್ದ ಜಾಗಿಂಗ್
ಸೂಟ್, ಶೂ.. ತೆಗೆದಿರಿಸಿಕೊಂಡು.. ಅಲಾರಂ.. ಇಟ್ಟು ಮಲಗಿದೆ.
ಬೆಳಗ್ಗೆ ಐದಕ್ಕೆಲ್ಲಾ `ಕರ್ತವ್ಯಂ.. ದೈವಮಾಹ್ನಿಕಂ' ಅಂತ ಅಲಾರಂ ಸುಪ್ರಭಾತ ಹಾಡಿ.. ನನ್ನ ಸವಿನಿದ್ದೆಗೆ, ತಣ್ಣೀರೆರಚಿದಾಗ ವಿಧಿ ಇಲ್ಲದೆ ಎದ್ದೆ.. ಕೊನೆ ಪ್ರಯತ್ನವಾಗಿ ಮೆಲ್ಲಗೆ ` ನಾಳೆ ಇಂದ ಹೋದ್ರೆ ಆಗಲ್ವಾ' ಅಂತ ರಾಗ ಎಳೆದೆ, `ಸರಿ ಬಿಡಿ.. ನಿಮ್ಮ ಪ್ಯಾಂಟ್ಗಳ್ನೆಲ್ಲಾ...' ಅಂತ ಹೆದರಿಸಿದ್ಲು.. `ಬೇಡ.. ನಾನು ಜಾಗಿಂಗ್ ಗೆ ಹೋಗ್ತೀನಿ.. ನೀನು ಮಲಗು' ಅಂತ ಅವಳಿಗೆ ಬೆಚ್ಚಗೆ ಹೊದಿಸಿ.. ನಿತ್ಯಕರ್ಮಗಳನೆಲ್ಲಾ ಮುಗಿಸಿಕೊಂಡು.. ಸಿದ್ಧವಾಗಿ ಹೊರಟೆ.. ` ಬರ್ತಾ ಹಾಗೆ ಹಾಲು ತಗೊಂಡು ಬನ್ನಿ' ಅನ್ನೋ ಸ್ವರ ಕೇಳಿಸ್ತು.. ನನ್ನನ್ನ ಜಾಗಿಂಗ್ ಗೆ ಬಲವಂತ ಪಡಿಸಿದ್ದರಲ್ಲಿ ಈ ಹುನ್ನಾರವೂ ಅಡಗಿದೆ ಅಂತ ತಿಳಿದು.. ಹೂಂಗುಟ್ಟಿ.. ಹೊರಟೆ...
ಮನೆ ಹತ್ರ ಇರೋ ಪಾರ್ಕ್ ಗೆ ಹೋದಾಗ ಹೊಸದೊಂದು ಪ್ರಪಂಚನೇ ನನ್ನ ಕಣ್ಣೆದುರಿಗೆ ಇತ್ತು... ಆಗತಾನೆ ಮೂಡ್ತಿರೋ ಸೂರ್ಯನ ಎಳೇ ಕಿರಣಗಳ ಮದ್ಯೆ.. ವಯೋಮಾನದ ಭೇದವಿಲ್ಲದ ಹಾಗೆ ಎಷ್ಟೋಂದು ಮಂದಿ ಪಾರ್ಕಲ್ಲಿ ವಾಕಿಂಗ್, ಜಾಗಿಂಗ್ ಮಾಡ್ತಾ ಇದ್ರೂ.. ಕೆಲವರು ಕೈ-ಕಾಲು ಆಡಿಸ್ತಾ ವಿಚಿತ್ರವಾಗಿ ನಡೀತಿದ್ರೂ, ನಡುವಯಸ್ಕರ ಗುಂಪೊಂದು ರಾಜಕೀಯ ವಿಶ್ಲೇಷಣೆಯಲ್ಲಿ ನಿರತವಾಗಿದ್ರೆ.. ಹೆಂಗಸರ ಗುಂಪು ನಗುತ್ತಾ.. ಹರಟುತ್ತಾ ಹೆಜ್ಜೆ ಹಾಕ್ತಾ ಇದ್ರು, ಕೆಲವರು ಈ ಪ್ರಪಂಚಕ್ಕೂ ,ತಮಗೂ ಸಂಬಂಧವೇ ಇಲ್ಲದವರಂತೆ ಒಬ್ಬಂಟಿಗಳಾಗಿ ಓಡ್ತಾ ಇದ್ರು.. ಹದಿಹರೆಯದ ಹುಡುಗರು, ಸುಕೋಮಲೆಯರಾದ ತರುಣಿಯರು ಕಿವಿಗೆ ಇಯರ್ ಪೋನ್ ಸಿಕ್ಕಿಸಿಕೊಂಡು ಓಡೋದನ್ನ ನೋಡೋದೆ ಒಂದು ಅದ್ಬುತ..ಪಕ್ಕದಲ್ಲೇ `ಜಿಂಕೆ ಮರಿ ಓಡ್ತಾ ಇದೆ ನೋಡ್ಲ ಮಗ' ಅನ್ನೋ ಹಾಡು ಕೇಳಿಸೋ ಹಾಗೆ ಒಬ್ಬರು ಮೊಬೈಲ್ನಲ್ಲಿ ಹಾಡು ಕೇಳಿಸಿಕೊಂಡು ನಡಿತಾ ಇದ್ರು...ಛೇ..ಇಷ್ಟು ದಿನ ಇಂತಹ ದೃಶ್ಯಗಳಿಂದ ನಾನು ವಂಚಿತನಾಗಿದ್ದನಲ್ಲಾ ಅಂತ ನನ್ನನ್ನ ನಾನೇ ಶಪಿಸಿಕೊಂಡೆ.. ಸರಿ ಈಗ ಓಡೋದೋ.. ನಡಿಯೋದೋ ಅಂತ ಯೋಚಿಸ್ದೆ.. ನಾನು ಓಡಿದ್ರೆ.. `ಆನೆ ಮರಿ ಓಡ್ತಾ ಇದೆ ನೋಡ್ಲಾ ಮಗ' ಅಂತ ಯಾರಾದ್ರೂ ಆಡಿಕೊಂಡ್ರೆ ಕಷ್ಟ ಅಂತ ನಡೆಯೋದಿಕ್ಕೆ ಶುರು ಮಾಡ್ದೆ.. ಅಷ್ಟರಲ್ಲಿ ನನ್ನ ಹಿಂದೆ ಬಂದ ಪರಿಚಿತರೊಬ್ಬರು..` ರೀ ವಾಕಿಂಗ್ ಅಂದ್ರೆ.. ಆರಾಮಾಗಿ ನಡೆಯೋದಲ್ಲ.. ಬ್ರಿಸ್ಕ್ ಆಗಿ ವಾಕ್ ಮಾಡಿ' ಅಂತ ಹೇಳಿ.. ನಾನು ಬಾಯ್ ತೆರೆಯೋ ಮುಂಚೆನೇ ಜೋರಾಗಿ ಕೈ ಬೀಸತಾ ಹೋರಟೇ ಹೋದ್ರು... ನಾನು ಅವರ ಹಾಗೆ ಕೈ ಬೀಸಿಕೊಂಡು ನಡೆಯೊದಿಕ್ಕೆ ಪ್ರಾರಂಭ ಮಾಡ್ದೆ.. ಎದುರು ಸಿಕ್ಕ ಅಜ್ಜಿಯೊಬ್ಬರು `ಅಲ್ಲಪ್ಪಾ.. ನೀನು ಆ ಮಗುಗೆ ಹಾಗಾ ಕಷ್ಟ ಕೊಡೋದು' ಅಂದಾಗ ನಾನು ಕಕ್ಕಾಬಿಕ್ಕಿ.. `ಇಲ್ಲ ಅಮ್ಮ ನನ್ನ ಮಗನಿಗೆ ಅಪರೂಪಕ್ಕೆ ಒಂದೆರಡು ಏಟು ಕೊಟ್ತೀನಿ ಅಷ್ಟೇ' ಅಂದೆ.. `ಅಯ್ಯೋ.. ನಾನು ಹೇಳಿದ್ದು ರಾಘವೇಂದ್ರ ಮಹಿಮೆ ಧಾರವಾಹಿಲಿ ನೀವು ಆ ಅಪ್ಪಣ್ಣನಿಗೆ ಹಾಗಾ ಕಷ್ಟ ಕೊಡೋದು 'ಅಂದಾಗ ಇವರು ಧಾರವಾಹಿಯ ನನ್ನ ಪಾತ್ರದ ಬಗ್ಗೆ ಕೇಳ್ತಾ ಇದ್ದಾರೆ ಅಂತ ಮನವರಿಕೆ ಆಗಿ `ಅಮ್ಮ ಅದು ಪಾತ್ರ... ನಾನಲ್ಲ.. ನಿರ್ಧೇಶಕರು ಹೇಳಿದ ಹಾಗೆ ನಾವು ಕೇಳಬೇಕು 'ಅಂತೆಲ್ಲಾ ಅವರಿಗೆ ವಿವರಣೆ ಕೊಟ್ರು.. `ಏನೋಪ್ಪ.. ನೀವು ಅಂಥಹ ಪಾತ್ರನೆಲ್ಲಾ ಮಾಡಬೇಡಿ, ನಮಗೆ ಇಷ್ಟವಾಗೊಲ್ಲ'ಅಂತ ಹೇಳಿ ಅವರು ಹೊರೆಟ್ರು... ನಾನು ಒಂದೆರಡು ಸುತ್ತು ಹೊಡೆದು.. ಅಲ್ಲೇ ಇದ್ದ ಬೆಂಚ್ ಮೇಲೆ ಕೂತುಕೊಂಡೆ.. ತಕ್ಷಣ ಹಾಲು ತಗೊಂಡು ಹೋಗಬೇಕಾದ್ದು ನೆನಪಾಗಿ.. ಎದ್ದು.. ಅಲ್ಲೇ ಮಾರಾಟ ಮಾಡ್ತಾ ಇದ್ದ ಹಾಲು ತಗೊಂಡು.. ಮನೆಗೆ ಹೊರಟೆ..
ಮನೆಗೆ ಹೋಗಿ.. ಸೋಫಾ ಮೇಲೆ ಕುಳಿತು ಸುಧಾರಿಸಿಕೊಳ್ಳುತ್ತಿದ್ದಾಗ.. ಹೆಂಡತಿ ` ಪಾಪ ತುಂಬಾ ಸುಸ್ತಾಗಿದ್ದೀರಾ.. ಇವತ್ತು ಕಾಫಿ ಬೇಡ ತಗೊಳ್ಳಿ.. ಬೂಷ್ಟ್' ಅಂತ ಲೋಟ ಕೈಲಿಟ್ಳು... ಜಾಗಿಂಗ್ ಹೋದ್ರೆ.. ಇಷ್ಟು ಮರ್ಯಾದೆ ಸಿಗುತ್ತೆ ಅಂತ ಗೊತ್ತಾಗಿ ಖುಷಿ ಪಟ್ಟೆ... ಆದ್ರೂ ಯಾಕೋ ಸ್ವಲ್ಪ ಕಾಲು ನೋವು... ನಾಳೆ ಒಂದಿನ ಜಾಗಿಂಗ್ ಗೆ ರಜಾ ಹಾಕಲಾ?.... ಏನಂತೀರಾ....?

No comments:
Post a Comment