ಇಂದಿನ ದಿನಗಳಲ್ಲಿ ಮದುವೆಯಾಗಿ ವರುಷ ತುಂಬುವ ಮೊದಲೇ
ವೈವಾಹಿಕ ಸಂಬಂಧಗಳು ಅರ್ಥ ಕಳೆದುಕೊಂಡು.. ಚಿಕ್ಕ-ಪುಟ್ಟ ವಿಷಯಗಳಿಗೆಲ್ಲಾ ವಿಚ್ಛೇದನ
ಹಂತಕ್ಕೆ ತಲುಪುತ್ತಿವೆ.. ಒಟ್ಟು ಕುಟುಂಬಗಳನ್ನು ಇಷ್ಟ ಪಡದ ಹೆಣ್ಣುಮಕ್ಕಳು ಅದೇ
ಕಾರಣಕ್ಕೆ ತಮ್ಮ ಸಂಸಾರವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ... ಅಂತಹ ಪರಿಸ್ಥಿತಿಯ
ಗಂಡಿನ ಮಾನಸಿಕ ತೊಳಲಾಟವೇ ಈ ಕವನ
****************************** ******************************
ವಿಚ್ಛೇದನ
---------
ಮರೆತೆಯಾ ಸಪ್ತಪದಿ ನಾಗೋಲಿ
ನೆನಪಿಲ್ಲವೇ ಬಂ
******************************
ವಿಚ್ಛೇದನ
---------
ಮರೆತೆಯಾ ಸಪ್ತಪದಿ ನಾಗೋಲಿ
ನೆನಪಿಲ್ಲವೇ ಬಂ
ಧು-ಬಾಂಧವರ ಹಿತನುಡಿ-ಹಾರೈಕೆ
ಸಡಿಲಗೊಂಡಿತೆ ನಾ ಕಟ್ಟಿದ ಕರೀಮಣಿ
ಅರ್ಥೇಚ-ಧರ್ಮೇಚ-ಕಾಮೇಚ ನಾತಿಚರಾಮಿ
ಎಂದು ಹೇಳಿದಾ ಆ ವಚನಕ್ಕೇನು ಬೆಲೆ
ನಿನ್ನ ಬಿಟ್ಟಿಲಾರೆನೆಂದು ಹೇಳಿದ ಮಾತುಗಳೆಲ್ಲಾ ನಾಟಕವೇನು
ಮೈಗಂಟಿದಾ ಅರಿಷಿಣ ಇನ್ನೂ ಒಣಗಿಲ್ಲ
ನಿನ್ನ ಕೈಯಲ್ಲಿರುವ ಮದರಂಗಿ ಅಳಿಸಿಲ್ಲ
ನೀ ಎನ್ನ ಪ್ರೀತಿಸಿದ್ದು ಸುಳ್ಳೇನು
ಸಂಸಾರ ಇಷ್ಟು ಬೇಗ ನಿಸ್ಸಾರವಾಯಿತೇನು
ಭವಿಷ್ಯದ ಕನಸುಗಳ ಸುಲಭದಲ್ಲಿ ಅಳಿಸಿಬಿಟ್ಟೆಯೇನು
ನಾ ಮಾಡಿದ ತಪ್ಪೇನು.. ನಿನ್ನ ಒಪ್ಪೇನು
ನನ್ನ ಅಪ್ಪ-ಅಮ್ಮ ನಿನ್ನ ಹೆತ್ತವರಂತೆ ಅಲ್ಲವೇನು
ನಿನಗಾಗಿ ಅವರ ತೊರೆಯಲಾರೆ .. ನಿನ್ನನ್ನು ಬಿಡಲಾರೆ
ಕೋರ್ಟು ನೀಡುವ ವಿಚ್ಛೇದನ ನನ್ನ ಮರೆಸಬಲ್ಲದೇನು
ಸಡಿಲಗೊಂಡಿತೆ ನಾ ಕಟ್ಟಿದ ಕರೀಮಣಿ
ಅರ್ಥೇಚ-ಧರ್ಮೇಚ-ಕಾಮೇಚ ನಾತಿಚರಾಮಿ
ಎಂದು ಹೇಳಿದಾ ಆ ವಚನಕ್ಕೇನು ಬೆಲೆ
ನಿನ್ನ ಬಿಟ್ಟಿಲಾರೆನೆಂದು ಹೇಳಿದ ಮಾತುಗಳೆಲ್ಲಾ ನಾಟಕವೇನು
ಮೈಗಂಟಿದಾ ಅರಿಷಿಣ ಇನ್ನೂ ಒಣಗಿಲ್ಲ
ನಿನ್ನ ಕೈಯಲ್ಲಿರುವ ಮದರಂಗಿ ಅಳಿಸಿಲ್ಲ
ನೀ ಎನ್ನ ಪ್ರೀತಿಸಿದ್ದು ಸುಳ್ಳೇನು
ಸಂಸಾರ ಇಷ್ಟು ಬೇಗ ನಿಸ್ಸಾರವಾಯಿತೇನು
ಭವಿಷ್ಯದ ಕನಸುಗಳ ಸುಲಭದಲ್ಲಿ ಅಳಿಸಿಬಿಟ್ಟೆಯೇನು
ನಾ ಮಾಡಿದ ತಪ್ಪೇನು.. ನಿನ್ನ ಒಪ್ಪೇನು
ನನ್ನ ಅಪ್ಪ-ಅಮ್ಮ ನಿನ್ನ ಹೆತ್ತವರಂತೆ ಅಲ್ಲವೇನು
ನಿನಗಾಗಿ ಅವರ ತೊರೆಯಲಾರೆ .. ನಿನ್ನನ್ನು ಬಿಡಲಾರೆ
ಕೋರ್ಟು ನೀಡುವ ವಿಚ್ಛೇದನ ನನ್ನ ಮರೆಸಬಲ್ಲದೇನು
No comments:
Post a Comment