ಗೆಳೆಯರೇ ನಿಮಗಿದೋ... ಪ್ರೀತಿ ಸ್ವಾಗತ...
ಬಹಳ ದಿನಗಳಿಂದ ನನ್ನದೇ ಒಂದು ಬ್ಲಾಗ್ ಇದ್ದರೆ ಎಷ್ಟು ಚಂದ ಅನಿಸುತ್ತಿತ್ತು.. ಫೇಸ್ ಬುಕ್ ಗೆಳೆಯರನೇಕರು ಈ ಬಗ್ಗೆ ವಿಚಾರಿಸಿದ್ದರು, ಬ್ಲಾಗ್ ಮಾಡುವಂತೆ ಸಲಹೆಯನ್ನೂ ಇತ್ತಿದ್ದರು,, ಬಿಡುವಾದಾಗ ಗೀಚುವ ಸಾಲುಗಳಿಗೆ (ಕವನ ಅಂದುಕೊಳ್ಳಬಹುದು) ಮೆಚ್ಚುಗೆಯ ಮಾತುಗಳು ಕೇಳಿದಾಗ, ಅವುಗಳೆಲ್ಲವನ್ನು ಒಂದು ಕಡೆಯೇ ಶೇಖರಿಸಿಡುವುದು ಉತ್ತಮ ಎಂಬ ಅನಿಸಿಕೆ ನನಗೂ ಒಪ್ಪಿಗೆಯಾಗಿತ್ತು.. ಆದರೆ ತಾಂತ್ರಿಕವಾಗಿ ನಾನು ದಡ್ಡ, ಬ್ಲಾಗ್ ಶುರುಮಾಡುವುದು ಹೇಗೆ ಎಂದೇ ಗೊತ್ತಿರಲಿಲ್ಲ.. ಪ್ರಯತ್ನಿಸಿದ್ದೆ , ಆದರೆ ಸಫಲತೆ ಕಂಡಿರಲಿಲ್ಲ. ಒಂದು ದಿನ ನನ್ನ ಅಕ್ಕ ಸುನಿತಾ ಅಕ್ಕ ಕೂಡ, ಬ್ಲಾಗ್ ಮಾಡು ಎನ್ನುವ ಸಲಹೆ ಕೊಟ್ಟರು, ಅವರಿಗೆ ನನ್ನ ಪರಿಸ್ಥಿತಿ ವಿವರಿಸಿದೆ. ಅವರು ನನಗಾಗಿ ಈ ಬ್ಲಾಗ್ ಮಾಡಿಕೊಟ್ಟರು. ಅವರಿಗೆ ನಾನು ಚಿರಖುಣಿ... Thank you Sunitha Akka... :) ನನ್ನ ಕವನಗಳೆಂಬ .. ಗೀಚುವಿಕೆಯನ್ನು ಓದಿ.. ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸಿ...
- ನಿಮ್ಮವ
ಆಯ್ತು ಅಣ್ಣಾಜಿ..
ReplyDeleteಧನ್ಯವಾದಗಳು ಟಮ್ಮು :)...ನಿನ್ನ ಬರವಣಿಗೆ ದಿನದಿಂದ ದಿನಕ್ಕೆ ಪಕ್ವವಾಗುತ್ತ ಹೋಗಲಿ....
ReplyDelete